ಫ್ಯಾಶನ್ ಲೋಕದಲಿ

ಬಳ್ಳಿಗಳೆಲ್ಲ ಬಳುಕುತ್ತ ಹೆಜ್ಜೆ ಹಾಕುವಾಗ
ನೋಡುಗರ ಕಣ್ಣಲ್ಲಿ ಹೂವೊಂದು ಅರಳುತಿದೆ,
ಮಕರಂದವದು ಇಳಿದು ಹೃದಯದಲಿ

ಸಣ್ಣ ವಾಯುಭಾರ ಕುಸಿಯುತಿದೆ

ಬಣ್ಣಗಳ ಓಕುಳಿಯಲ್ಲ
ಆದರೂ ಎಲ್ಲೆಲ್ಲೂ ರಂಗೋ ರಂಗು

ಕಣ್ಣ ನೇರ ನೆಟ್ಟು
ಕಿವಿ ಆಲಿಸುತಿಲ್ಲ ಪಿಸು ಮಾತಿನ ಗುಂಗು

ಒಂಟಿಯಾಗಿ ರ್ಯಾಂಪ್ ವಾಕ್ ಮಾಡುವಾಗ
ಸುಗ್ಗಿ ಕಾಲದ ಸಡಗರ
ಜೊತೆಗಾರರ ಕೂಡಿದಾಗ
ಮೂಡಿದ ಆಸೆಗಳಿಗೆ ಮುಜುಗರ

ಕಿಚ್ಚಿಲ್ಲದ ಧಗೆಯಲ್ಲಿ ಕುಲುಮೆಯಾದ ಮನ
ಪಾಶ್ಚಾತ್ಯ ಉಡುಗೆಯಲ್ಲೂ
ಮೆಲ್ಲಗೆ ಕೇಳಿಬರುತ್ತಿತ್ತು
ಜನ, ಗಣ, ಮನ...

ಮೀಸೆ ಹೊತ್ತವರ ಹೊಗಳಿಕೆಗೆ
ಬೇರೆ ಸಮೂಹವೇ ಇದೆ,
ನನಗಂತೂ ಕಾಡಿದ್ದು

ಹೈ ಹೀಳ್ಡಿನ ತೀಕ್ಷ್ಣ ಸದ್ದು
ಮೊನಚು ಕತ್ತಿಯಂಥ ಕಣ್ಗಪ್ಪು
ಕೊಬ್ಬಿದ, ಉಬ್ಬಿದ ಸೌಂದರ್ಯ
ತುರುಬಿನಿಂದ ಜಾರಿ ತುಂಟಾಟವಾಡುತ್ತಿದ್ದ
ಮುಂಗುರುಳ ಸಾಲು
ಪಾರದರ್ಶಕ ಪರದೆಯ ಹಿಂದಿನ
ನವಿರು ನಿತಂಬ

ಮತ್ತೆ ಇನ್ನೂ ಅದೆಷ್ಟೋ ಹೇಳಲಾಗದಂಥವು!!

ನಿದ್ದೆಗೆಡಿಸುವ ಬಂ(ಭಂ)ಗಿಗೆ
ನಿದ್ದೆ ತರಿಸುವ ಕವನ ಗೀಚಲು
ಶಾಪವಿಕ್ಕಿತು ಲೇಖನಿ;
ಹಾಳೆ ಮಾತ್ರ ಥೇಟು ನನ್ನಂತೆ

ಹುಚ್ಚು ರಾತ್ರಿಯ ಚಾಂದಿನಿ!!

-- ರತ್ನಸುತ

Comments

 1. ಕಿಚ್ಚಿಲ್ಲದ ಧಗೆಯಲ್ಲಿ ಕುಲುಮೆಯಾದ ಮನ
  ಸರಿಯಾದ ವಾಕ್ಯ ಪ್ರಯೋಗ!
  ಮಾನಿನಿಯ ಮೈಮಾಟ,
  ನಮಗದೇ ಕಟವಾಯಿ ಜೊಲ್ಲಿಳಿವ ನೋಟ..

  ಜೈ ಭೋಲೋ ಎಫ್ ಟೀವಿಗೇ...

  ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩