ಮಿಂಚಿ ಮಾಯವಾದ ಕಲ್ಪನೆ

ಮುಂಜಾನೆ ಎಚ್ಚರವಾಗಿ
ನಿಧಾನಕ್ಕೆ ಕಣ್ಬಿಟ್ಟು ನೋಡಿದೆ
ಬಿಸಿ ಚಹ ಲೋಟದ ಹೊಗೆ
ಅವಳ ಮೊಗವ ಮರೆಸುತ್ತಿತ್ತು

ಅವಳೋ ಆಗಲೇ ಮನೆಗೆಲಸ ಹಿಡಿದು
ಜಳಕ ಮುಗಿಸಿ ತುರುಬು ಬಿಗಿಸಿದ್ದು
ಇನ್ನೂ ಆರಿಲ್ಲದ ಮುಂಗುರುಳ
ಹನಿ ಜಾರಿ ರವಿಕೆ ಹಸಿಯಾಗಿತ್ತು;
ಎಚ್ಚರವಾಗಿದ್ದು ಕಣ್ಣಿಗಷ್ಟೇ ಅಲ್ಲ

ಹೃದಯವೂ ಒಮ್ಮೆ ನಿಬ್ಬೆರಗಾಗಿ
ಜೋರಾಗಿ ಬಡಿದುಕೊಂತು!!

ರಾತ್ರಿಯಿಡೀ ನಡೆದದ್ದು
ಸುಂದರ ಕಲ್ಪನೆಯೋ ಎಂಬಂತೆ
ನಿಜವಾಗಿಸಿಕೊಳ್ಳುವ ಹುರುಪು;
ಎದೆಯ ನೂಕಿ ದೂರ ಸರಿದು

ಟವಲ್ಲು ಮುಖಕ್ಕೆ ಬಿಸಾಡಿ
"
ಫ್ರೆಶಪ್ಪಾಗಿ ಬನ್ನಿ" ಅಂದಳು

ಬಯಕೆಗಳ ಹೇಗೋ ಬಚ್ಚಿಟ್ಟು
ಕೋಣೆಯಿಂದ ಜಾರಿಕೊಂಡವಳು
ಮತ್ತೆ ನೀರಿಗೆ ಬರದೇ ಇರುವಳೇ?!!
ಬಚ್ಚಲಮನೆಯಿಂದ ಕೂಗಿದೆ

"
ಪೇಸ್ಟೆಲ್ಲಿ, ಸೋಪೆಲ್ಲಿ, ಶಾಂಪೂsss??"
ಎಲ್ಲಕ್ಕೂ ಮೌನವೇ ಉತ್ತರ!!


ಮನೆಯಾಚೆ ಹೆಜ್ಜೆ ಇಟ್ಟಮೇಲೆ
ದಾರಿ ಮರೆತವನಂತೆ ನೂರು ಬಾರಿ ಹಿಂದಿರುಗಿ
ಏನಾದರೂ ಕೊಡಬಹುದೆಂಬ ಎದುರು ನೋಟ;
ಅದೇ ತುಂಟ ಮಂದಹಾಸ ಹೊತ್ತು

ಮಾಡಿದಳು ಟಾಟ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩