Friday, 20 February 2015

ಫೋನು ಇಲ್ಲ ಮೆಸೇಜಿಲ್ಲ


ಕೆಲ್ವೊಮ್ಮೆ ಒಂದೇ ಕಡ್ಡಿ ಸಿಗ್ನಲ್ಲಿದ್ದು
ಎಷ್ಟು ಸ್ಪಷ್ಟವಾಗಿ ಕೇಳ್ತಿತ್ತು
ನಿನ್ನ ಮಾತು ನನಗೆ, ನನ್ನ ಮಾತು ನಿನಗೆ;
ಇಂದು ನೆಟ್ವರ್ಕು ಫುಲ್ಲಾಗಿದ್ರೂ

ಅಲ್ಲಲ್ಲಿ ತಡವರಿಸುತ್ತ ಬರುತ್ತಿದೆ ದ್ವನಿ
ಪ್ರಾಬ್ಲಮ್ಮು ಮನಸಿನ ನೆಟ್ವರ್ಕಿನಲ್ಲಿರ್ಬೇಕಲ್ವೇ ?

ಬ್ಯಾಟರಿ ಇಷ್ಟು ಬೇಗ ಡ್ರೈನ್ ಆಗಿದ್ದು
ಇದೇ ಮೊದಲು ಅನ್ನುವುದು ಸುಳ್ಳು
ಬೇಕೆಂದಾಗ ಫುಲ್ ಮಾಡಿಕೊಂಡೇ
ಗಂಟೆಗಟ್ಟಲೆ ಮಾತಾಡಿಕೊಂಡಿದ್ದೆವು
ಒಮ್ಮೊಮ್ಮೆ ಚಾರ್ಜಿಗಿಟ್ಟೇ ಚಾಟ್ ಮಾಡ್ತಾ
ಸಿಡಿಯಬಹುದಾದ ಸಾಧ್ಯತೆಯನ್ನೂ ಇಗ್ನೋರ್ ಮಾಡಿದ್ದೆವು

ಮುಂಚೆ ಯಾರೂ ಇಲ್ಲದ
ಲೋನ್ಲಿ ಜಾಗ ಹುಡುಕುತ್ತಿದ್ದ ಕಣ್ಣು
ಈಗ ಅವರಿವರ ನೆಪವೊಡ್ಡಿ
ಕಾಲ್ ಕಟ್ ಮಾಡುವ ಮಟ್ಟಕ್ಕೆ ಬೆಳೆದಿದೆ
ಯಾವುದು ಸುಳ್ಳು, ಯಾವುದು ಸತ್ಯ ಅಂತ
ಹಿಂಜರಿದ ಮಾತೇ ಕ್ಲಿಯರ್ರಾಗಿ ಹೇಳುತ್ತೆ!!

ಇನ್ಕಮಿಂಗ್ ಬಾರ್ ಆಗಿ ತಿಂಗಳು ಕಳೆದು
ಮೆಸೇಜ್ಗಳಿಗೆ ರೆಪ್ಲೈ ಸಿಕ್ಕು ವರ್ಷವೇ ಆಯ್ತು
ಈಗ್ಲೂ ಫೋನ್ ರಿಂಗಾದಾಗ ಒಂದು ಆಸೆ
ಅದು ನಿನ್ನ ಮಿಸ್ಡ್ ಕಾಲ್ ಆಗಿರ್ಲಿ ಅಂತ,
ಆದ್ರೆ ಹಾಳಾದ್ದು ಅತ್ತ ಮಗು ಥರ

ಎತ್ಕೊಳೊ ವರ್ಗೂ ಬೊಡ್ಕೊತಲೇ ಇರುತ್ತೆ!!

ಫೋನ್ ಕಳ್ದೋಯ್ತು ನಂಬರ್ ಕೂಡ ಅಂತ
ಎಷ್ಟ್ ಬೇಕಾದ್ರೂ ಕಥೆ ಕಟ್ಟು
ಆದ್ರೆ ಕಥೆನ ನಿನ್ ಬಾಯಾರೆ ಕೇಳೋ ಆಸೆ
ಯಾರೋ ಮೂರ್ನೆ ವ್ಯಕ್ತಿ ಹೇಳ್ದಾಗ
ಮನ್ಸಿಗೆ ಮುಳ್ಚುಚ್ದಂಗಾಗ್ತದೆ
ಸಾಯೋ ಹಂಗ್ ಅನ್ಸ್ತದೆ!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...