Friday, 20 February 2015

ನೂರೊಂದು ಪ್ರಶ್ನೆಗಳು

ಅದೆಷ್ಟು ಇಂಪು ಹಿಂಜರಿಕೆಯ ಮೌನ?
ಅದೇಕೆ ನುಲಿವೆ ಸೋಕುವ ಮುನ್ನ
?
ಅದೇನು ಸಣ್ಣ ನಗು, ಸಮ್ಮತಿ
?
ಅದೆಲ್ಲಿ ಕಲಿತೆ ಕೊಲ್ಲುವುದನ್ನ
?
ಮತ್ತೆ ಮತ್ತೆ ಬೇಡಿ ಪಡೆಯಬೇಕು ಪ್ರಾಣ!!


ಅದ್ಯಾವ ದಾರಿಯಲ್ಲಿ ನಿನ್ನ ತಿರುವು?
ಅದೆಷ್ಟು ರಮ್ಯ ನಿನ್ನ ಚೆಲುವು
?
ಅದಾಗೇ ಮೂಡಿಬಂತೇ ಜೊನ್ನು
,
ಅಥವ ಚಂದ್ರನೇನು ನಿನ್ನ ಕಣ್ಣು?


ಸ್ವಗತಗಳು ಸಾವಿರಾರು, ತೆರೆದಿಡುವ ಮುನ್ನ
ನಿನ್ನ ಸೆರಗು, ಅರ್ಥಾತ್ ದುಪ್ಪಟ್ಟ ಹಿಡಿ
ಅದೇಕೋ ಒಂದೇ ಹಠ
ಹಸ್ತಾಂತರಕೆ ತುದಿಗಾಲ ನಿಲುವು
ಹೆಸರಿಲ್ಲದೆ ಹುಟ್ಟಿದಂತಿದೆ ಒಲವು

ಅದು, ಇದು ಮಾತನಾಡಿ
ಯಾವುದೂ ನಿಲ್ಲಲಿಲ್ಲ ನನ್ನಲಿ, ನಿನ್ನಲಿ;
ನಿರೀಕ್ಷೆಯ ಹೊಂಡದಲ್ಲಿ

ತುಂಬು ನೀರ ನೀಳ ಬೇಸರ
ಮಿಂಚು ಹುಳು ಸಂಚರಿಸಲಿ
ಕದಡಿ ತರಂಗಗಳನೆಬ್ಬಿಸಿ
ನನ್ನಲಿ ಮತ್ತೆ ನಿನ್ನಲಿ!!

ಹೀಗೇಕೆ ಎದೆಗೊರಗಲು ಗೊಂದಲ?
ಬಾ, ಎಲ್ಲವ ಆಲಿಸು ನಿಧಾನಕೆ
;
ಕೈ ಚಾಚು ದೂರ ನಿಂತ ನಿನ್ನನು

ಎಳೆದು ನಾಟಿಕೊಳ್ಳಲೇನು ಹೃದಯಕೆ?

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...