ಅಮ್ಮ ಹಚ್ಚಿದ ಒಲೆ

ಹಾಲು ಉಕ್ಕುವ ಸಮಯ
ಯಾರಾದರೂ ಹಾಜರಿರಬೇಕು
ಒಲೆಯ ಮುಂದೆ ಕಾವೀಸಿಕೊಂಡು

ಹೇಮಂತ ಋತುವಿನ ಶೀತಲ ಮುಂಜಾವಿನಲ್ಲಿ
ಮೈ ಮರೆತದ್ದೂ ತಿಳಿಯಲಿಲ್ಲ
ಹಾಲು ಉಕ್ಕಿದ್ದನ್ನೂ ಗಮನಿಸಲಿಲ್ಲ
ಕೆಂಡಕೆಲ್ಲ ಕ್ಷೀರಾಭಿಷೇಕ
ಅಮ್ಮನಂಥ ಒಲೆಗೆ ಕೆನೆಯ ಪಾಕ

ಕಮಟು ಆವರಿಸಿ ಕೋಣೆ
ಥೇಟು ಅಪ್ಪನ ಅಂಗಿ
ದುರ್ನಾತದಲೂ ಅಲ್ಲಿ
ಹುಚ್ಚು ಆನಂದ,
ಅಮ್ಮ ಬರುವ ಮುನ್ನ

ಕದ್ದೋಡು ಮುಕುಂದ!!

ಊಟದ ವೇಳೆಗೆ ಇಣುಕಿ
ಅಮ್ಮನಿಲ್ಲದ್ದ ಅರಿತು
ಅಡುಗೆ ಮನೆಯೊಳ ನುಸುಳಿ
ಘಮ-ಘಮಿಸುವ ಭಕ್ಷ್ಯ
ಒಲೆಯ ಸುತ್ತ

ಚುಕ್ಕಿಯ ಬಳಸಿ ರೇಖೆ
ಸಿಂಗಾರಗೊಂಡಿತ್ತು ಮದುವಣಗಿತ್ತಿಯಂತೆ!!

ಅಮ್ಮ ಹಚ್ಚಿದ ಒಲೆ
ಆರಿತ್ತು ವೇಳೆ
ಸೌದೆಯಿಟ್ಟು ಊದುಗೊಳವೆ ಹಿಡಿದೆ
ಹಿಂದಿನಿಂದ ಸಿಹಿ ಪೆಟ್ಟು ಪಡೆದೆ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩