ಮತ್ತೆ ಮತ್ತೆ ಬೇರ ಬಿತ್ತಿ

ಏನೂ ತಿನ್ನಲಿಚ್ಛಿಸದ ಹಸಿವು
ಏನೂ ನೋಡಲಿಚ್ಛಿಸದ ನೋಟ
ಯಾರ ನೆರಳ ಇಚ್ಛಿಸದ ಬದುಕು
ಯಾವ ಹಿತಕೂ ಒದಗದ ಉಸಿರು

ಎಂಥ ಹೆಸರ ಗುರುತಿಗೂ ದಿಗಿಲು
ಜೊತೆಗೆ ಬರದ ದಾರಿಯ ಪಯಣ
ಒಂದು ಮೌನದೊಳಗಣ ಸದ್ದು
ಮತ್ತು ಸದ್ದು ಸಾರುವ ಮೌನ

ಊರು ಸೂರಿಗಿಲ್ಲದ ಕೊರಗು
ನಾನು ಯಾರಿಗೂ ಕಾಯದವನು
ಎಷ್ಟೇ ಘಾಡವಾಗಿ ಏಕಾಂತ
ನನ್ನ ಬಿಟ್ಟು ಒಲ್ಲೆ ಯಾವುದನೂ

ಸತ್ತ ಸೂರ್ಯ ಮತ್ತೆ ಹುಟ್ಟಿದರೆ
ಇಲ್ಲ ಅತ್ತು ಸುಮ್ಮನಾದವರು
ಕಿತ್ತು ನೋಡಿಕೊಳ್ಳಲಾಗುವುದೇ
ಹೃದಯಕ್ಕಂಟಿಕೊಂಡ ಸಿಬಿರು?

ಬಿಟ್ಟು ಹೊರಟೆ ಎಲ್ಲವನೂ ಮರೆತು
ಮತ್ತೆ ಹೊಸತನೇನನ್ನೋ ಬಯಸಿ
ಹೇಳಿ ಹೋಗುವಂಥ ವ್ಯವಧಾನ
ನನ್ನಲ್ಲಿಲ್ಲ ದಯವಿಟ್ಟು ಕ್ಷಮಿಸಿ

ಕಡೆಯ ಮಾತು ಎಲ್ಲದರ ಕೊನೆಗೆ
ತುರುಗಿ ನೀಡಿ ನನ್ನ ದೋಚಿರಲು
ಯಾರೂ ದೂರ ಬೇಡಿ ನನ್ನ
ಇಂತೇ ಸಾಧ್ಯವಾಯ್ತು ನನಗಿರಲು!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩