ಮೊದ್ಲೆಲ್ಲ ಏಸೋಂದು ಪ್ರೀತಿ
ಬ್ಯಾಡ್ಬ್ಯಾಡಂದ್ರೂ ಉಕ್ತಿತ್ತು
ಮಾತ್ನಾಗ್ ಮಂಟ್ಪ ಕಟ್ಟಿ ಅಲ್ಲೇ
ನಮ್ಮದ್ವೆ ಆದಂಗಿತ್ತು
ಸಿಕ್ಕಿದ್ಕೂಡ್ಲೆ ಅಪ್ಕೊಂಡ್ ಪ್ರಾಣ
ಬುಟ್ಬುಟ್ಟಿದ್ದು ನೆಪ್ಮಾಡ್ಕೋ
ಹೇಳಿದ್ ಮಾತ್ ನಿಭಾಯ್ಸೋಗಂಟ
ಸಿಟ್ನ ಒಸಿ ಎತ್ತಿಟ್ಕೋ
ಕೈ ಹಿಡ್ದೇಟ್ಗೆ ಮೈ ಮುಟ್ದಂಗಾ?
ಯಾಕಿಂಗೆ ಬಾಯ್ಬೊಡ್ಕೊಂತಿ
ನಿನ್ ಸಾವಾಸ ಮಾಡಿ ನೋಡು
ಆಗಿವ್ನಾನು ಮರ್ಕೋತಿ
ಕನ್ಸಲ್ ಬಂದು ಕಾಡ್ತೀಯಲ್ಲೇ
ದೆವ್ವ ಮೆಟ್ದಂಗ್ ಆಗೈತೆ
ಏನೇ ಯೋಳು ನಿನ್ ಜೊತ್ಯಾಗೆ
ಜೀವ್ನ ಮಜ್ಬೂತಾಗೈತೆ
ಕಂಡೋರ್ಮಾತ್ಗೆ ಕಿವಿಕೊಟ್ನಿನ್ನ
ನೆಮ್ದಿ ಹಾಳ ಮಾಡ್ಕೊಂಡೀಯ
ಕಣ್ಣಲ್ ಸಿಗ್ನಲ್ ಕೊಟ್ಟಿದ್ಕೂಡ್ಲೆ
ತ್ವಾಟದ್ ಮನೆಗ್ ಬತ್ತೀಯಾ?
ಬೆಳ್ಳಿ, ಚಿನ್ನ ಅಂದು ಅಂದು
ನಾಲ್ಗೆ ಎಕ್ಕುಟ್ಟೋಗದೆ
ಮುದ್ದಾಗೊಂದು ಅಡ್ಡೆಸ್ರಿಟ್ಟು
"ಇವ್ಳೇ" ಅಂತ ಕರಿಯಾದೆ!!
-- ರತ್ನಸುತ
ಬ್ಯಾಡ್ಬ್ಯಾಡಂದ್ರೂ ಉಕ್ತಿತ್ತು
ಮಾತ್ನಾಗ್ ಮಂಟ್ಪ ಕಟ್ಟಿ ಅಲ್ಲೇ
ನಮ್ಮದ್ವೆ ಆದಂಗಿತ್ತು
ಸಿಕ್ಕಿದ್ಕೂಡ್ಲೆ ಅಪ್ಕೊಂಡ್ ಪ್ರಾಣ
ಬುಟ್ಬುಟ್ಟಿದ್ದು ನೆಪ್ಮಾಡ್ಕೋ
ಹೇಳಿದ್ ಮಾತ್ ನಿಭಾಯ್ಸೋಗಂಟ
ಸಿಟ್ನ ಒಸಿ ಎತ್ತಿಟ್ಕೋ
ಕೈ ಹಿಡ್ದೇಟ್ಗೆ ಮೈ ಮುಟ್ದಂಗಾ?
ಯಾಕಿಂಗೆ ಬಾಯ್ಬೊಡ್ಕೊಂತಿ
ನಿನ್ ಸಾವಾಸ ಮಾಡಿ ನೋಡು
ಆಗಿವ್ನಾನು ಮರ್ಕೋತಿ
ಕನ್ಸಲ್ ಬಂದು ಕಾಡ್ತೀಯಲ್ಲೇ
ದೆವ್ವ ಮೆಟ್ದಂಗ್ ಆಗೈತೆ
ಏನೇ ಯೋಳು ನಿನ್ ಜೊತ್ಯಾಗೆ
ಜೀವ್ನ ಮಜ್ಬೂತಾಗೈತೆ
ಕಂಡೋರ್ಮಾತ್ಗೆ ಕಿವಿಕೊಟ್ನಿನ್ನ
ನೆಮ್ದಿ ಹಾಳ ಮಾಡ್ಕೊಂಡೀಯ
ಕಣ್ಣಲ್ ಸಿಗ್ನಲ್ ಕೊಟ್ಟಿದ್ಕೂಡ್ಲೆ
ತ್ವಾಟದ್ ಮನೆಗ್ ಬತ್ತೀಯಾ?
ಬೆಳ್ಳಿ, ಚಿನ್ನ ಅಂದು ಅಂದು
ನಾಲ್ಗೆ ಎಕ್ಕುಟ್ಟೋಗದೆ
ಮುದ್ದಾಗೊಂದು ಅಡ್ಡೆಸ್ರಿಟ್ಟು
"ಇವ್ಳೇ" ಅಂತ ಕರಿಯಾದೆ!!
-- ರತ್ನಸುತ
No comments:
Post a Comment