ಬಿಟ್ಟಿರಲಾಗದ ಒಂದು ಚಟ
ಸದಾ ಅಂಟಿಕೊಂಡೇ ಇರಬೇಕು
ನಿನ್ನ ಕೀಟಲೆ ನೆನಪಿನಂತೆ
ಮೂರಂಕಿ ಸಿಗಬಲ್ಲ ಪರೀಕ್ಷೆಯಲಿ
ಮೂರೇ ಪದ ಬರೆದದ್ದು
"ನೀ ನನ್ನ ಪ್ರಾಣ"
ಒಂಟಿತನದ ಖಾಯಿಲೆಗೆ ಯಂತ್ರ ಕಟ್ಟಿಸಿಕೊಂಡೆ
ನಿನಗೂ ಒಂದ ಮಂತ್ರಿಸಿ ತಂದಿರುವೆ
ಕಟ್ಟಲೇ ಕೊರಳಿಗೆ ಈಗ?
ಬೆಳಿಗ್ಗೆ ಕೈ ಜಾರಿ
ಹರಿಶಿಣ ಅಕ್ಕಿಗೆ ಬಿದ್ದು ಬೆರೆಯಿತು
ಅದೇ ವೇಳೆಗೆ ಹಲ್ಲಿಯೊಂದು ಲೊಚಗುಟ್ಟಿತು!!
ಹಾಳು ಹೆಲ್ಮೆಟ್ಟು ಕೂದಲ ಕದಡಿ
ಹೇರ್ ಸ್ಟೈಲ್ ಎಲ್ಲ ಹಾಳಾದಾಗಲೇ
ನೀ ಎದುರು ಸಿಗಬೇಕಾಯ್ತೇ? ಛೆ!!
ಮಾತು ಮೊದಲಾಗಿಸೋಕೆ
ಒಂದು ಮುಹೂರ್ತ ನಿಶ್ಚಯವಾದಂತೆ
ತಡೆದು ನಿಲ್ಲಿಸಿ ತೊದಲುತ್ತೇನೆ
ತುಂಡುಗಳ ಕೂಡಿಸಿ ಮನ ತುಂಬಿಕೋ
ಉಗುರು ಕಚ್ಚಿ ಉಗಿಯಬೇಡ
ಇಲ್ಲಿ ಕೊಡು
ನಿನ್ನ ಗುರುತಿಗೆ ಗೋರಂಟಿ ಹಚ್ಚಿ
ಜೋಪಾನವಾಗಿಟ್ಟುಕೊಳ್ಳುತ್ತೇನೆ!!
-- ರತ್ನಸುತ
ಸದಾ ಅಂಟಿಕೊಂಡೇ ಇರಬೇಕು
ನಿನ್ನ ಕೀಟಲೆ ನೆನಪಿನಂತೆ
ಮೂರಂಕಿ ಸಿಗಬಲ್ಲ ಪರೀಕ್ಷೆಯಲಿ
ಮೂರೇ ಪದ ಬರೆದದ್ದು
"ನೀ ನನ್ನ ಪ್ರಾಣ"
ಒಂಟಿತನದ ಖಾಯಿಲೆಗೆ ಯಂತ್ರ ಕಟ್ಟಿಸಿಕೊಂಡೆ
ನಿನಗೂ ಒಂದ ಮಂತ್ರಿಸಿ ತಂದಿರುವೆ
ಕಟ್ಟಲೇ ಕೊರಳಿಗೆ ಈಗ?
ಬೆಳಿಗ್ಗೆ ಕೈ ಜಾರಿ
ಹರಿಶಿಣ ಅಕ್ಕಿಗೆ ಬಿದ್ದು ಬೆರೆಯಿತು
ಅದೇ ವೇಳೆಗೆ ಹಲ್ಲಿಯೊಂದು ಲೊಚಗುಟ್ಟಿತು!!
ಹಾಳು ಹೆಲ್ಮೆಟ್ಟು ಕೂದಲ ಕದಡಿ
ಹೇರ್ ಸ್ಟೈಲ್ ಎಲ್ಲ ಹಾಳಾದಾಗಲೇ
ನೀ ಎದುರು ಸಿಗಬೇಕಾಯ್ತೇ? ಛೆ!!
ಮಾತು ಮೊದಲಾಗಿಸೋಕೆ
ಒಂದು ಮುಹೂರ್ತ ನಿಶ್ಚಯವಾದಂತೆ
ತಡೆದು ನಿಲ್ಲಿಸಿ ತೊದಲುತ್ತೇನೆ
ತುಂಡುಗಳ ಕೂಡಿಸಿ ಮನ ತುಂಬಿಕೋ
ಉಗುರು ಕಚ್ಚಿ ಉಗಿಯಬೇಡ
ಇಲ್ಲಿ ಕೊಡು
ನಿನ್ನ ಗುರುತಿಗೆ ಗೋರಂಟಿ ಹಚ್ಚಿ
ಜೋಪಾನವಾಗಿಟ್ಟುಕೊಳ್ಳುತ್ತೇನೆ!!
-- ರತ್ನಸುತ
No comments:
Post a Comment