ಇಷ್ಟಕ್ಕೇ ನಿಲ್ಲದು

ಮೂಗಿನ ಮೇಲೆ ಕನ್ನಡಕ,
ಅದು ಕಂಡಷ್ಟೇ ಸಲೀಸಾಗಿ

ಮನಸೂ ಕಾಣಬೇಕಿತ್ತು;
ಬಾಹ್ಯ ರೂಪವ ಅಳೆದು ತೂಗಿ

ಯೋಗ್ಯತೆ ನಿಶ್ಚಯಿಸುವ
ಮೂಢರ ಸಹಾಯಕ್ಕೆ

ಮೊಡವೆಯ ಮೂಲಕ್ಕೆ ಕೊಟ್ಟಷ್ಟು ಒತ್ತು
ಮನಸನು ಅರಿಯಲು ಕೊಟ್ಟಿದ್ದರೆ
ಚೂರು ಒಳ್ಳೆತನಗಳು ಕಾಣಸಿಗುತ್ತಿದ್ದವೇನೋ,
ಅದ್ಯಾರೋ ಕಿವಿಗೆ ಊದಿದ್ದರಂತೆ

ಹಸ್ತ ಮೈಥುನದಿಂದ ಮೊಡವೆ ಮೂಡದೆಂದು;
ಅಲ್ಲಿಗೆ ನನ್ನ ಪ್ರಶ್ನೆ

ಹಸ್ತ ಮೈಥುನ ತಪ್ಪೋ?
ಅಥವ

ಮೊಡವೆ ಮೂಡದಿದ್ದುದು ತಪ್ಪೋ?


ಹೊಟ್ಟೆ ಚೂರು ಉಬ್ಬಿದೆ ಅಂದುಕೊಳ್ಳೋಣ,
ಅದೇನು ಪಾಪದ ಲಕ್ಷಣವೇ
?!!
ಗಂಡಸನು ಪಾಟಿ ವಿಂಗಡಿಸುವುದು

ಅದೆಲ್ಲಿಯ ನಿಯಮಾವಳಿ?

ಸಣ್ಣಕ್ಕಿದ್ದರೆ ಸಣ್ಣ,
ದಪ್ಪಕ್ಕಿದ್ದರೆ ದಪ್ಪ
,
ನಡುವಿದ್ದವರಿಗೆ ನೂರು ಹೆಸರು

ಅದು ಮನಸಿಚ್ಛೆಗನುಸಾರವಾಗಿ

ತುಟಿ ಕಪ್ಪಗಿದ್ದರೆ ಸಿಗರೇಟು
ಕೆಮ್ಮಿದರೆ ಟಿ.ಬಿ
ಕಣ್ಣು ಕೆಂಪೆದ್ದರೆ ಕುಡುಕ
ಮಾತನಾಡಿದರೆ ದುರಹಂಕಾರಿ
ಸುಮ್ಮನಿದ್ದರೆ ನಿಶ್ಯಕ್ತ
ಜೋರು ಮಾಡಿದರೆ ದುಷ್ಟ
ಕೈಗೇ ಸಿಗದಿದ್ದರೆ ಕಳ್ಳ

ಪ್ರಶ್ನೆ ಕೇಳಿದರೆ ಅಧಿಕಪ್ರಸಂಗಿ
ಉತ್ತರ ಕೊಡದಿರೆ ದಡ್ಡ
ಸ್ವಲ್ಪ ನಾಚಿದರೂ ಗಂಡಸ್ಥನದ ಶಂಕೆ
ಕವನ ಗೀಚಿದರೆ ಸಹವಾಸಗಳ ಶಂಕೆ
ಸಿಡುಕಿದರೆ ಕೋಪಿಷ್ಟ
ಹಾಸ್ಯ ಮಾಡಲು ಕಪಿ
ಉಗುರು ಕಚ್ಚಿದರೆ ಪುಕ್ಕಲ
ಹೆಚ್ಚು ತಿಂದರೆ ತಿಂಡಿಪೋತ

ಎಲ್ಲಿಯೂ ನಿಲ್ಲದೆ
ಪಾತ್ರದಿಂದ ಪಾತ್ರಕ್ಕೆ ಜಿಗಿಯುತ್ತ
ನಟಿಸುವುದೇ ದೊಡ್ಡ ಸರ್ಕಸ್ಸು,
ಮಾಡದ ಹೊರತು ಹೆಸರುಗಳು ಫಿಕ್ಸು

ಲೆಕ್ಕಕ್ಕೇ ಸಿಗದಷ್ಟು!!

-- ರತ್ನಸುತ

Comments

 1. ಕ್ಯಾ ಕರೇ ಭಾಯೀ,

  ಮದುವೆಗೆ ಮುಂಚೆ ನಾನು ನರಪೇತಲನಂತಿದ್ದೆ
  ಯಾಕ್ಲಾ ರಮಣಾರೆಡ್ಡಿ ಥರ ಒಣ್ಣಿಕಂಡಿದ್ದೀ ಅಂತಿದ್ರು,
  ಈಗ ಡೊಳ್ಳು ಹೊಟ್ಟೆ ಬಂದಿದೆ ಸ್ವಯಂ ಭಾರಕ್ಕೆ
  ಅಲ್ ಕಣ್ಲೇ ಯಾವ ಅಂಗ್ಡಿ ಅಕ್ಕಿಲಾ ಅಂತ ಮೂದಲಿಕೆ!

  ದುನಿಯಾ ಐಸಾಹೀ ಭೈ!

  ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩